Skip to content
- ಪ್ರಾಚೀನ ಮಹಿಳಾ ಹರಿದಾಸರ ಹೆಸರಿನಲ್ಲಿ ದತ್ತಿ ಸ್ಥಾಪನೆ ಮಾಡುವುದು.
- ಮಹಿಳಾ ಹರಿದಾಸ ಒಕ್ಕೂಟದ ಮೂಲ ನಿಧಿ ಸಂಗ್ರಹ.
- ದಾಸ ಸಾಹಿತ್ಯದ ಪ್ರಕಾರಗಳಲ್ಲಿ ಕಾರ್ಯಾಗಾರಗಳನ್ನು ಏರ್ಪಡಿಸುವುದು. (ಶುದ್ಧ ಪಾಠ, ಸಂಗ್ರಹಣಾ ಕಾರ್ಯ, ಸುಳಾದಿ ಕಾರ್ಯಾಗಾರ, ಉಗಾಭೋಗ ಕಾರ್ಯಾಗಾರ ಇತ್ಯಾದಿ)
- ಸಂಗೀತಗಾರರಿಂದ ಹೊಸ ಕೀರ್ತನೆಗಳಿಗೆ ರಾಗ ಸಂಯೋಜನೆ ಮಾಡಿಸುವುದು, ಹಾಡಿಸುವುದು.
- ವರ್ಷ ಪರ್ಯಂತ ಬರುವ ಹರಿದಾಸ/ ಮಹಿಳಾ ಹರಿದಾಸರ ಆರಾಧನೆಯನ್ನು ಜ್ಞಾನ ಕಾರ್ಯದ ಮೂಲಕ ಆಚರಣೆ ಮಾಡುವುದು
- ದಾಸ ಸಾಹಿತ್ಯದ ಹಲವು ಆಯಾಮಗಳ ಚಿಂತನೆ ನಡೆಸುವುದು – ದಾಸ ಸಾಹಿತ್ಯದ ಸಾಂಸ್ಕೃತಿಕ ಮಹತ್ವವನ್ನು (ನೃತ್ಯ, ರೂಪಕ, ಗಮಕ, ಕೀರ್ತನೆ ಮುಂತಾದ ಆಯಾಮಗಳ ಮೂಲಕ) ಗುರುತಿಸುವುದು.
- ಕಾಲಾನುಕ್ರಮದಲ್ಲಿ ಪ್ರಾಚೀನ, ಅರ್ವಾಚೀನ, ಸಮಕಾಲೀನ ಮಹಿಳಾ ಹರಿದಾಸರ ಪರಿಚಯಾತ್ಮಕ ಉಪನ್ಯಾಸಗಳನ್ನು ಏರ್ಪಡಿಸುವುದು,
- ಮಹಿಳಾ ಹರಿದಾಸರ ಪರಿಚಯಾತ್ಮಕವಾದ ಗ್ರಂಥ ಪ್ರಕಟಣೆ ಮಾಡುವುದು. ಅವರ ಛಾಯಾ ಚಿತ್ರ ಸಂಗ್ರಹಣೆ
- ಆಗಾಗ ಶಿಬಿರಗಳ ಆಯೋಜನೆ, ವ್ಯಕ್ತಿತ್ವ ಪರಿಚಯ, ಕೃಷ್ಣ ಜಪ ಮುಂತಾದವುಗಳ ಪ್ರಯೋಗಾತ್ಮಕತೆಯ ಕಾರ್ಯಕ್ರಮ-ಇನ್ನಿತರ ಆಯಾ ಸಂದರ್ಭಕ್ಕೆ ತಕ್ಕಂತೆ ಸಮಾರಂಭಗಳನ್ನು ಆಯೋಜಿಸುವುದು.
- ಕಿಶೋರಿಯರ ತಂಡಗಳ ಆಯೋಜನೆ.
- ಕರ್ನಾಟಕದಲ್ಲಿರುವ ಇತರ ದಾಸ ಸಾಹಿತ್ಯ ಸಾಂಸ್ಕೃತಿಕ ಸಂಘಟನೆಗಳ ಮಾಹಿತಿ ಸಂಗ್ರಹ ಮಾಡಿ ಸಂಯುಕ್ತವಾಗಿ ಕಾರ್ಯಕ್ರಮಗಳ ಆಯೋಜನೆ ಮಾಡುವುದು
- ವಾರ್ಷಿಕೋತ್ಸವದ ಆಯೋಜನೆ ಮತ್ತು ಪ್ರಶಸ್ತಿ ಸನ್ಮಾನಗಳ ಆಯೋಜನೆ
- ಪ್ರತಿ ತಿಂಗಳು ಎಲ್ಲ ಸದಸ್ಯರಿಂದ ನಿರಂತರ ಉಪನ್ಯಾಸ ಪ್ರಾರ್ಥನೆ ಏರ್ಪಡಿಸುವುದು.
- ಒಕ್ಕೂಟದ ಸದಸ್ಯರಿಗೆ ಪರಿಚಯದ ಕಾರ್ಡ ನೀಡುವುದು – ಎಲ್ಲ ಸದಸ್ಯರಿಗೆ ಸ್ಕಾರ್ಫ ನೀಡುವುದು.
- ದಾಸ ಸಾಹಿತ್ಯದಲ್ಲಿ ಕಾರ್ಯಗೈಯುತ್ತಿರುವ ಬ್ರಾಹ್ಮಣೇತರ ಮಹಿಳಾ ಹರಿದಾಸರನ್ನು ಗುರುತಿಸುವುದು
- ಮಹಾ ಪೋಷಕರು, ಪೋಷಕರು, ದಾನಿಗಳಿಗೆ ಗೌರವ ಸಮರ್ಪಣೆ.
- ಹೊಸದಾಗಿ ರಚನೆ ಮಾಡುತ್ತಿರುವ ಮಹಿಳಾ ಹರಿದಾಸರ ಕೃತಿಗಳ ಪರಿಷ್ಕರಣೆ
- ಗ್ರಾಮೀಣ ಪ್ರದೇಶಗಳಲ್ಲಿ ಮಹಿಳಾ ಹರಿದಾಸರ ಕೃತಿಗಳ ಪ್ರಸಾರ
- ಹರಿದಾಸರ ಕೃತಿಗಳ ಅನುವಾದ ಕಾರ್ಯಗಳ ಚಿಂತನೆ,
- ಪ್ರತಿ ಎರಡು ವರ್ಷಕ್ಕೊಮ್ಮೆ ಪದಾಧಿಕಾರಿಗಳ ಆಯ್ಕೆ
- ಪ್ರತಿ ವರ್ಷ ಸರ್ವ ಸದಸ್ಯರ ಮೀಟಿಂಗ್ ಆಯೋಜನೆ